A S Ponnanna

A S Ponnanna

Member of the Karnataka Legislative Assembly

Author name: admin

17/09/2022, Theerthodbhava at Talakaveri 

ಈ ವರ್ಷ ತಲಕಾವೇರಿ ತೀರ್ಥೋದ್ಭವದ ಮುಹೂರ್ತ ಅಕ್ಟೋಬರ್ 17ರಂದು ಮೇಷ ಲಗ್ನದಲ್ಲಿ ಸಂಜೆ 7.21 ಕ್ಕೆ ನಿಗದಿಯಾಗಿರುವುದು ಬಹಳ ಸಂತಸ ತಂದಿದೆ. ತಾಯಿ ಕಾವೇರಿಯ ಆಶೀರ್ವಾದ ನಾಡಿನ ಸಮಸ್ತ ಜನರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಜೀವನದಿಯಾಗಿ ನಮಗೆ ಸಕಲವನ್ನು ಕಲ್ಪಿಸಿರುವ ತಾಯಿಯ ಆಶೀರ್ವಾದ ಪಡೆಯೋಣ. ಎಲ್ಲರೂ ಆ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗೋಣ.

17/09/2022, Theerthodbhava at Talakaveri  Read More »

19/09/2022, Kailpodh in Bengaluru.

ಶ್ರೀ ಕಾವೇರಿ ಕೊಡವ ಸಂಘ, ಬೆಂಗಳೂರು, ಇವರ ವತಿಯಿಂದ ಭಾರಿ ಸಂಭ್ರಮದ ಕೈಲ್‌ ಪೋಳ್ದ್ ಆಚರಣೆ ಮಾಡಲಾಯಿತು. ನಾವು ಎಲ್ಲೇ ಇದ್ದರೂ, ನಮ್ಮ ಆಚರಣೆಗಳನ್ನು, ನಮ್ಮ ಹಬ್ಬಗಳನ್ನು ಸಂಭ್ರಮಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬಹುದು. ವಾಣಿಜ್ಯೋದ್ಯಮಿ ಛಾಯಾ ನಂಜಪ್ಪ ರಾಜಪ್ಪ ಅವರೂ ಕೂಡ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ನನ್ನನು ಆಮಂತ್ರಿಸಿ ಬಹಳ ಅದ್ದೂರಿ ಹಾಗೂ ಅಚ್ಚುಕಟ್ಟಾಗಿ ಸಮಾರಂಭವನ್ನು ಆಯೋಜಿಸಿದ್ದ ಸಂಘದ ಅಧ್ಯಕ್ಷರಾದ ಚೊಟ್ಟಂಗಡ ಎಂ.ಗಣಪತಿ, ಕಾರ್ಯದರ್ಶಿಗಳಾದ ಅನ್ನಲಾಮಡ ವಿನೋದ್ ಉತ್ತಯ್ಯ, ಪದಾಧಿಕಾರಿಗಳು ಮತ್ತು

19/09/2022, Kailpodh in Bengaluru. Read More »

22/09/2022, Vindictive arrests of party workers

ಮಧ್ಯರಾತ್ರಿ ಕಾರ್ಯಾಚರಣೆ ಮಾಡಿ ನಮ್ಮ ಪಕ್ಷದ ಕಾನೂನು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್ ಸೇರಿದಂತೆ ಐವರನ್ನು ಅವರ ಮನೆಗೆ ಹೋಗಿ ವಶಕ್ಕೆ ಪಡೆದ ಪೊಲೀಸರ ಸೇಡಿನ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅನಿವಾರ್ಯ. ಪೇಸಿಎಂ ಪೋಸ್ಟ್‌ರ್ ಕೂಡ ಆಡಳಿತ ಪಕ್ಷದ ಭ್ರಷ್ಟಾಚಾರದ ವಿರುದ್ದದ ಒಂದು ಹೋರಾಟ. ಪೋಸ್ಟರ್ ಅಂಟಿಸಿದ್ದಕ್ಕೆ ಪೋಲಿಸರು ಸರ್ಕಾರದ ಪರವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವು ಕಾನೂನು ಮೂಲಕವೇ ಉತ್ತರಿಸುತ್ತೇವೆ. ಈ ಸಂಬಂಧ ಕಾನೂನಾತ್ಮಕ ವಿಚಾರಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ

22/09/2022, Vindictive arrests of party workers Read More »

23/09/2022, My view on the BJP’s “offense”, that is lower than a traffic offense

ಬೆಂಗಳೂರಿನಲ್ಲಿ ಪೋಸ್ಟರ್ ಅಂಟಿಸಿದ ಲಕ್ಷಾಂತರ ಪ್ರಕರಣಗಳಲ್ಲಿ ಒಂದರಲ್ಲೂ ಯಾರನ್ನೂ ಪೊಲೀಸ್ ಠಾಣೆಗೆ ಕರೆತಂದ ಉದಾಹರಣೆ ಇಲ್ಲ. ಆದರೆ ನಮ್ಮ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನು, ಇನ್ನಿತರ ಕಾರ್ಯಕರ್ತರನ್ನು ರಾತ್ರೋರಾತ್ರಿ ಠಾಣೆಗೆ ತಂದಿರುವುದು ಪೊಲೀಸ್ ದೌರ್ಜನ್ಯವಲ್ಲದೆ ಮತ್ತೇನೂ ಅಲ್ಲ. ಸರ್ಕಾರದ ಮೇಲಿನ ಜನರ ಆಕ್ರೋಶವನ್ನು ಈ ಪೋಸ್ಟರ್ ಗಳು ಬಿಂಬಿಸುತ್ತವೆ. ಪೋಸ್ಟರ್ ಅಂಟಿಸುವುದಕ್ಕೆ ಸಾವಿರ ರೂಪಾಯಿ ಜುಲ್ಮಾನೆ ಬಿಟ್ಟು ಬೇರೇನೂ ಶಿಕ್ಷೆ ಕಾನೂನಿನಲ್ಲಿ ಇಲ್ಲ. ಹಾಗಿದ್ದರೂ ನಮ್ಮ ಕಾರ್ಯಕರ್ತರನ್ನು ಠಾಣೆಯಲ್ಲಿ ತಂದು ಕೂರಿಸಿರುವುದು ಸರ್ಕಾರಕ್ಕಿರುವ ಭಯಕ್ಕೆ ಸಾಕ್ಷಿ. ಒಂದು ಪ್ರಕರಣಕ್ಕೆ

23/09/2022, My view on the BJP’s “offense”, that is lower than a traffic offense Read More »

25/09/2022, Bharath Jodo preparations at Gonikoppal.

ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ಭಾರತ ಐಕ್ಯತಾ ಯಾತ್ರೆಗೆ ಕೊಡಗಿನಲ್ಲಿ ಕೂಡ ಜನ ಕಾತುರದಿಂದ ಕಾಯುತ್ತಿದ್ದಾರೆ. ಇದರ ಅಂಗವಾಗಿ ಗೋಣಿಕೊಪ್ಪಳಲ್ಲಿ ಯಾತ್ರೆಗೆ ಸಂಬಂಧಿಸಿದ ತಯಾರಿಗೆ ಚಾಲನೆ ನೀಡಿ ಸಭೆಯನ್ನು ನಡೆಸಲಾಯಿತು. ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಸೇರಿದ್ದ ಸಭೆಯಲ್ಲಿ ಯಾತ್ರೆಯನ್ನು ಯಶಸ್ವಿಗೊಳಿಸುವ ಬಗ್ಗೆ ಸಲಹೆ-ಸೂಚನೆಗಳನ್ನು ಪರಾಮರ್ಶಿಸಲಾಯಿತು. ಯಾತ್ರೆಯ ಬಗ್ಗೆ ಎಲ್ಲರಲ್ಲೂ ಇರುವ ಉತ್ಸಾಹಕ್ಕೆ ಸಭೆ ಸಾಕ್ಷಿಯಾಗಿತ್ತು. ಪ್ರೀತಿ ವಿಶ್ವಾಸದಿಂದ ಜನರ ಮನಸ್ಸುಗಳನ್ನು ಬೆಸೆಯಲು ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಯಶಸ್ವಿಗೊಳಿಸಲು ಎಲ್ಲರೂ ಶಕ್ತಿಮೀರಿ ಪ್ರಯತ್ನಿಸೋಣ ಎಂದು

25/09/2022, Bharath Jodo preparations at Gonikoppal. Read More »

27/09/2022, Onam by Hindu Malayali Samaj.

ಗೋಣಿಕೊಪ್ಪದ ಕೊಡಗು ಹಿಂದೂ ಮಲಯಾಳಿ ಸಮಾಜದ ಪದಾಧಿಕಾರಿಗಳ ಪದಗ್ರಹಣ ಮತ್ತು ಸಮಾಜದ ವತಿಯಿಂದ ಓಣಂ ಆಚರನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಬಂತು. ಸಮಾಜದ ಜನರನ್ನು ಸೇರಿಸಿ ಒಂದೊಳ್ಳೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮಾಜದ ಸದಸ್ಯರು ಹಾಗೂ ಆಯೋಜಕರಿಗೆ ಅಭಿನಂದನೆಗಳು. ಕೊಡಗಿನ ಸಂಸ್ಕೃತಿಗೆ ತಮ್ಮದೇ ವಿಶಿಷ್ಟ ಕೊಡುಗೆಯನ್ನು ಕೊಡುತ್ತಾ ಬಂದಿರುವ ಮಲಯಾಳಿ ಸಮಾಜಕ್ಕೆ ಅಭಿನಂದನೆಗಳು. ಈ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಪಿ.ಟಿ.ಉಷಾ ಅವರು ಪಾಲ್ಗೊಂಡಿದ್ದು ವಿಶಿಷ್ಟವಾಗಿತ್ತು. ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿ, ಪ್ರೀತಿಯಿಂದ ಬರಮಾಡಿಕೊಂಡ ಸಮಾಜದ ಎಲ್ಲರಿಗೂ ಧನ್ಯವಾದಗಳು.

27/09/2022, Onam by Hindu Malayali Samaj. Read More »

29/09/2022, Legal Cell meeting.

ಪಕ್ಷದ ಕಾನೂನು, ಮಾನವ ಹಕ್ಕು ಹಾಗೂ ಆರ್.ಟಿ.ಐ ಘಟಕದ ಸದಸ್ಯರ ಸಭೆ ಭುದವಾರ ಆಯೋಜಿಸಲಾಗಿತ್ತು. ನೇರ ವೀಡಿಯೊ ಕಾನ್ಫರೆನ್ಸ್ ಮುಖಾಂತರ ಹಲವಾರು ಸದಸ್ಯರು ರಾಜ್ಯದ ವಿವಿಧ ಭಾಗಗಳಿಂದ ಸಭೆಯಲ್ಲಿ ಪಾಲ್ಗೊಂಡರು. ದ್ವೇಷ ರಾಜಕಾರಣ, ಸಂವಿಧಾನ ವ್ಯವಸ್ಥೆಯನ್ನು ಹತ್ತಿಕ್ಕುವ ಪ್ರಯತ್ನಗಳು, ಪೊಲೀಸರ ದುರ್ಬಳಕೆ ಮುಂತಾದ ಸಂಚುಗಳು ಹೆಚ್ಚುತ್ತಿರುವ ಸಮಯದಲ್ಲಿ ನಮ್ಮ ಕಾನೂನು ಘಟಕ ಕೈಗೊಳ್ಳಬೇಕಾದ ಕ್ರಮಗಳು, ಪರಿಸ್ಥಿತಿಯನ್ನು ನಿಭಾಯಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ, ಕಾನೂನು ಘಟಕದ ಸದಸ್ಯರು ಇನ್ನು ಹೆಚ್ಚಿನ ರೀತಿಯಲ್ಲಿ ಸಕ್ರಿಯವಾಗಿ

29/09/2022, Legal Cell meeting. Read More »

02/10/2022, Indebted to the love and affection of people of Kodagu.

ಐತಿಹಾಸಿಕ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಅಪಾರ ಪ್ರೀತಿ ವಿಶ್ವಾಸವನ್ನು ತೋರಿಸಿದ ನನ್ನ ಪ್ರೀತಿಯ ಕೊಡಗಿನ ಜನರಿಗೆ ನನ್ನ ಪ್ರಣಾಮಗಳು ಮತ್ತು ಧನ್ಯವಾದಗಳು. ನೀವು ತೋರಿಸಿದ ಈ ಅಕ್ಕರೆಯ ಬೆಂಬಲ ಎಂದಿಗೂ ಮರೆಯಲಾಗದು. ದೇಶದ ಗಮನ ಈ ಯಾತ್ರೆಯ ಮೇಲೆ ಇದೆ. ಈಗ ಕರ್ನಾಟಕದಲ್ಲಿ ಸಂಚರಿಸುತ್ತಿರುವ ಯಾತ್ರೆಯಲ್ಲಿ ನಾನು ಪಾಲ್ಗೊಂಡ ಸಂಧರ್ಬದಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿ ನೀವು ಕೊಟ್ಟ ಬೆಂಬಲ ಅವಿಸ್ಮರಣೀಯ. ನಿಮ್ಮೆಲ್ಲರ ವಿಶ್ವಾಸವನ್ನು ಗಳಿಸಿರುವುದು ನನಗೆ ಹೆಮ್ಮೆ ಇದೆ. ದೇಶ ಕಟ್ಟುವ

02/10/2022, Indebted to the love and affection of people of Kodagu. Read More »

03/10/2022, The power and commitment of advocates on display.

ಆಧುನಿಕ ಭಾರತದ ಇತಿಹಾಸದಲ್ಲಿ ವಕೀಲರ ಪಾತ್ರ ಮಹತ್ವದ್ದು. ನಮ್ಮ ಸ್ವಾತಂತ್ರ್ಯ ಹೋರಾಟದ ಹಲವಾರು ನಾಯಕರುಗಳು ವಕೀಲರಾಗಿದ್ದವರು. ಮುಂದೆ ದೇಶಕಟ್ಟಿದ ಹಲವಾರು ನಾಯಕರು ವಕೀಲಿ ವೃತ್ತಿಯಿಂದ ಬಂದವರು. ಈಗ ಭಾರತ ಐಕ್ಯತಾ ಯಾತ್ರೆಯಲ್ಲಿ ಕೂಡ ವಕೀಲರ ಪಾತ್ರ ಮಹತ್ವದ್ದು. ದೇಶಕ್ಕೆ ಒಗ್ಗಟ್ಟಿನ ಅವಶ್ಯಕತೆ ಇದೆ. ಜನರನ್ನು ಬೆಸೆಯುವ ಕೆಲಸ ಮಾಡುವವರು ಬೇಕಾಗಿದ್ದಾರೆ. ಆ ಕೆಲಸವನ್ನು ತಮ್ಮ ವೃತ್ತಿಯಲ್ಲೂ ಮಾಡುವ ವಕೀಲರು ಐಕ್ಯತಾ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಪಕ್ಷದ ಕಾನೂನು ಘಟಕದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿರುವವರು,

03/10/2022, The power and commitment of advocates on display. Read More »

Scroll to Top