ಬೆಂಗಳೂರಿನಲ್ಲಿ ಪೋಸ್ಟರ್ ಅಂಟಿಸಿದ ಲಕ್ಷಾಂತರ ಪ್ರಕರಣಗಳಲ್ಲಿ ಒಂದರಲ್ಲೂ ಯಾರನ್ನೂ ಪೊಲೀಸ್ ಠಾಣೆಗೆ ಕರೆತಂದ ಉದಾಹರಣೆ ಇಲ್ಲ. ಆದರೆ ನಮ್ಮ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನು, ಇನ್ನಿತರ ಕಾರ್ಯಕರ್ತರನ್ನು ರಾತ್ರೋರಾತ್ರಿ ಠಾಣೆಗೆ ತಂದಿರುವುದು ಪೊಲೀಸ್ ದೌರ್ಜನ್ಯವಲ್ಲದೆ ಮತ್ತೇನೂ ಅಲ್ಲ.
ಸರ್ಕಾರದ ಮೇಲಿನ ಜನರ ಆಕ್ರೋಶವನ್ನು ಈ ಪೋಸ್ಟರ್ ಗಳು ಬಿಂಬಿಸುತ್ತವೆ. ಪೋಸ್ಟರ್ ಅಂಟಿಸುವುದಕ್ಕೆ ಸಾವಿರ ರೂಪಾಯಿ ಜುಲ್ಮಾನೆ ಬಿಟ್ಟು ಬೇರೇನೂ ಶಿಕ್ಷೆ ಕಾನೂನಿನಲ್ಲಿ ಇಲ್ಲ. ಹಾಗಿದ್ದರೂ ನಮ್ಮ ಕಾರ್ಯಕರ್ತರನ್ನು ಠಾಣೆಯಲ್ಲಿ ತಂದು ಕೂರಿಸಿರುವುದು ಸರ್ಕಾರಕ್ಕಿರುವ ಭಯಕ್ಕೆ ಸಾಕ್ಷಿ.
ಒಂದು ಪ್ರಕರಣಕ್ಕೆ ಒಂದೇ ಶಿಕ್ಷೆ ಕೊಡಲು ಸಾಧ್ಯ. ಆದರೆ ಒಂದೇ ಪ್ರಕರಣಕ್ಕೆ ಬೇರೆ ಬೇರೆ ಠಾಣೆಗಳಲ್ಲಿ ಎಂಟು ಎಫ್.ಐ.ಆರ್ ದಾಖಲಿಸಿರುವುದು ಅಧಿಕಾರದ ದುರುಪಯೋಗದ ಜೊತೆಗೆ ಸರ್ಕಾರದ ಹಾಸ್ಯಾಸ್ಪದ ನಡೆ ಕೂಡ.
ರಾಜಕೀಯ ದ್ವೇಷದಿಂದ ಕಾನೂನಿನ ದುರುಪಯೋಗ ನಡೆಯುತ್ತಿದೆ. ಅದರ ಜೊತೆ ಪೊಲೀಸ್ ಇಲಾಖೆಯ ದುರುಪಯೋಗವಾಗುತ್ತಿದೆ. ಹಿಂದೆ ಎಂದೂ ನಡೆಯದ ಕಾನೂನಿನ ಮೇಲಿನ ಹಲ್ಲೆ ಈಗ ಕರ್ನಾಟಕದಲ್ಲಿ ನಡೆಯುತ್ತಿದೆ.