ಗೋಣಿಕೊಪ್ಪದ ಕೊಡಗು ಹಿಂದೂ ಮಲಯಾಳಿ ಸಮಾಜದ ಪದಾಧಿಕಾರಿಗಳ ಪದಗ್ರಹಣ ಮತ್ತು ಸಮಾಜದ ವತಿಯಿಂದ ಓಣಂ ಆಚರನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಬಂತು.
ಸಮಾಜದ ಜನರನ್ನು ಸೇರಿಸಿ ಒಂದೊಳ್ಳೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮಾಜದ ಸದಸ್ಯರು ಹಾಗೂ ಆಯೋಜಕರಿಗೆ ಅಭಿನಂದನೆಗಳು. ಕೊಡಗಿನ ಸಂಸ್ಕೃತಿಗೆ ತಮ್ಮದೇ ವಿಶಿಷ್ಟ ಕೊಡುಗೆಯನ್ನು ಕೊಡುತ್ತಾ ಬಂದಿರುವ ಮಲಯಾಳಿ ಸಮಾಜಕ್ಕೆ ಅಭಿನಂದನೆಗಳು.
ಈ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಪಿ.ಟಿ.ಉಷಾ ಅವರು ಪಾಲ್ಗೊಂಡಿದ್ದು ವಿಶಿಷ್ಟವಾಗಿತ್ತು. ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿ, ಪ್ರೀತಿಯಿಂದ ಬರಮಾಡಿಕೊಂಡ ಸಮಾಜದ ಎಲ್ಲರಿಗೂ ಧನ್ಯವಾದಗಳು.