ಅಪಘಾತಕ್ಕೆ ಒಳಗಾಗಿದ್ದ ಮಾಜಿ ಸೈನಿಕರಾದ ಮತ್ರಂಡ (Matharanda) ವಸಂತ್ ಅವರು ಕಳೆದ ಒಂದೂವರೆ ವರ್ಷದಿಂದ ಚಿಕಿತ್ಸೆ ಪಡೆಯುತ್ತಿರುವ ವಿಚಾರ ಅವರ ಮನೆಯವರಿಂದ ತಿಳಿದು ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ವಸಂತ್ ಮತ್ತು ಅವರ ಕುಟುಂಬದವರಿಗೆ ಧೈರ್ಯ ಹೇಳಿ ಚಿಕಿತ್ಸೆಗೆ ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅವರಿಗೆ ಮಾಡಬಹುದಾದ ಸಹಾಯವನ್ನು ಮಾಡುವ ಭರವಸೆಯನ್ನು ನೀಡಿದ್ದೇನೆ.
ದೇಶದ ರಕ್ಷಣೆ ಮಾಡಿದ ಸೈನಿಕನನ್ನು ರಸ್ತೆ ಅಪಘಾತ ಮಾಡಿ ಸ್ಥಳದಲ್ಲೇ ಬಿಟ್ಟುಹೋದ ಘಟನೆ ಬಗ್ಗೆ ಕೇಳಿ ಮನಸ್ಸಿಗೆ ನೋವಾಗಿದೆ. ವಸಂತ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲ್ಲಿ ಮತ್ತು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.