ಪಕ್ಷದ ಕಾನೂನು, ಮಾನವ ಹಕ್ಕು ಹಾಗೂ ಆರ್.ಟಿ.ಐ ಘಟಕದ ಸದಸ್ಯರ ಸಭೆ ಭುದವಾರ ಆಯೋಜಿಸಲಾಗಿತ್ತು. ನೇರ ವೀಡಿಯೊ ಕಾನ್ಫರೆನ್ಸ್ ಮುಖಾಂತರ ಹಲವಾರು ಸದಸ್ಯರು ರಾಜ್ಯದ ವಿವಿಧ ಭಾಗಗಳಿಂದ ಸಭೆಯಲ್ಲಿ ಪಾಲ್ಗೊಂಡರು.
ದ್ವೇಷ ರಾಜಕಾರಣ, ಸಂವಿಧಾನ ವ್ಯವಸ್ಥೆಯನ್ನು ಹತ್ತಿಕ್ಕುವ ಪ್ರಯತ್ನಗಳು, ಪೊಲೀಸರ ದುರ್ಬಳಕೆ ಮುಂತಾದ ಸಂಚುಗಳು ಹೆಚ್ಚುತ್ತಿರುವ ಸಮಯದಲ್ಲಿ ನಮ್ಮ ಕಾನೂನು ಘಟಕ ಕೈಗೊಳ್ಳಬೇಕಾದ ಕ್ರಮಗಳು, ಪರಿಸ್ಥಿತಿಯನ್ನು ನಿಭಾಯಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಮುಂದಿನ ದಿನಗಳಲ್ಲಿ, ಕಾನೂನು ಘಟಕದ ಸದಸ್ಯರು ಇನ್ನು ಹೆಚ್ಚಿನ ರೀತಿಯಲ್ಲಿ ಸಕ್ರಿಯವಾಗಿ ಪಕ್ಷದ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದ್ದೇನೆ.