ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ಭಾರತ ಐಕ್ಯತಾ ಯಾತ್ರೆಗೆ ಕೊಡಗಿನಲ್ಲಿ ಕೂಡ ಜನ ಕಾತುರದಿಂದ ಕಾಯುತ್ತಿದ್ದಾರೆ. ಇದರ ಅಂಗವಾಗಿ ಗೋಣಿಕೊಪ್ಪಳಲ್ಲಿ ಯಾತ್ರೆಗೆ ಸಂಬಂಧಿಸಿದ ತಯಾರಿಗೆ ಚಾಲನೆ ನೀಡಿ ಸಭೆಯನ್ನು ನಡೆಸಲಾಯಿತು.
ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಸೇರಿದ್ದ ಸಭೆಯಲ್ಲಿ ಯಾತ್ರೆಯನ್ನು ಯಶಸ್ವಿಗೊಳಿಸುವ ಬಗ್ಗೆ ಸಲಹೆ-ಸೂಚನೆಗಳನ್ನು ಪರಾಮರ್ಶಿಸಲಾಯಿತು. ಯಾತ್ರೆಯ ಬಗ್ಗೆ ಎಲ್ಲರಲ್ಲೂ ಇರುವ ಉತ್ಸಾಹಕ್ಕೆ ಸಭೆ ಸಾಕ್ಷಿಯಾಗಿತ್ತು.
ಪ್ರೀತಿ ವಿಶ್ವಾಸದಿಂದ ಜನರ ಮನಸ್ಸುಗಳನ್ನು ಬೆಸೆಯಲು ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಯಶಸ್ವಿಗೊಳಿಸಲು ಎಲ್ಲರೂ ಶಕ್ತಿಮೀರಿ ಪ್ರಯತ್ನಿಸೋಣ ಎಂದು ಕರೆ ಕೊಟ್ಟೆ.