ಮಧ್ಯರಾತ್ರಿ ಕಾರ್ಯಾಚರಣೆ ಮಾಡಿ ನಮ್ಮ ಪಕ್ಷದ ಕಾನೂನು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್ ಸೇರಿದಂತೆ ಐವರನ್ನು ಅವರ ಮನೆಗೆ ಹೋಗಿ ವಶಕ್ಕೆ ಪಡೆದ ಪೊಲೀಸರ ಸೇಡಿನ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅನಿವಾರ್ಯ. ಪೇಸಿಎಂ ಪೋಸ್ಟ್‌ರ್ ಕೂಡ ಆಡಳಿತ ಪಕ್ಷದ ಭ್ರಷ್ಟಾಚಾರದ ವಿರುದ್ದದ ಒಂದು ಹೋರಾಟ. ಪೋಸ್ಟರ್ ಅಂಟಿಸಿದ್ದಕ್ಕೆ ಪೋಲಿಸರು ಸರ್ಕಾರದ ಪರವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವು ಕಾನೂನು ಮೂಲಕವೇ ಉತ್ತರಿಸುತ್ತೇವೆ.
ಈ ಸಂಬಂಧ ಕಾನೂನಾತ್ಮಕ ವಿಚಾರಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ ಖರ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿದೆ.
ನಂತರ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ಡಿ ಕೆ ಶಿವಕುಮಾರ್ ಅವರ ಜೊತೆ ತೆರಳಿ, ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸ್ ಕಾರ್ಯದ ವಿರುದ್ಧ ತೆಗೆದುಕೊಳ್ಳಬೇಕಾದ ಕಾನೂನು ಕ್ರಮ ಶುರು ಮಾಡಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತರ ಪರ ನಾವು ಸದಾ ನಿಲ್ಲುತ್ತೇವೆ. ಇದು ಜನಪರವಾದ, ಭ್ರಷ್ಟಾಚಾರದ ವಿರುದ್ಧದ ಹೋರಾಟ.

0uurhi
Your comment is awaiting moderation.