ನಮ್ಮ ನಾಡಿನ ಸಮಸ್ತ ಜನತೆಗೂ ತಾಯಿ ಕಾವೇರಿ ಸಂಕ್ರಮಣದ ಹಾರ್ದಿಕ ಶುಭಾಶಯಗಳು. ಸಾವಿರಾರು ವರ್ಷಗಳಿಂದ ಕೊಡಗಿನ ಜನರನ್ನು, ಇಲ್ಲಿನ ಕಾಡು, ಸಸ್ಯ ವನ್ಯಜೀವಿಗಳಿಗೆ ಜೀವನದಿಯಾದ ತಾಯಿಯ ಆಶೀರ್ವಾದ ಮತ್ತು ಕರುಣೆ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
ಕೊಡಗಿನ ಪ್ರತಿಯೊಬ್ಬರಿಗೂ ಇಂದು ಕಾವೇರಿ ತೀರ್ಥೋದ್ಭವದ ಹಬ್ಬ ಆಚರಣೆ. ನಮ್ಮ ಕುಲದೇವತೆ ಮತ್ತೊಮ್ಮೆ ನಮಗೆ ತನ್ನ ಸಾಕ್ಷಾತ್ ದರ್ಶನ ಕೊಡುವ ದಿನ. ಸಕಲ ಜೀವರಾಶಿಗಳಿಗೆ ಒಳಿತನ್ನು ಮಾಡುವ ತಾಯಿಗೆ ನನ್ನ ಭಕ್ತಿಪೂರ್ವಕ ನಮನಗಳು.