ಕೊಡಗಿನ ಕುಲದೇವತೆ, ತೀರ್ಥರೂಪಿಣಿ ಶ್ರೀ ಕಾವೇರಿ ಮಾತೆಯ ತೀರ್ಥೋದ್ಭವ ಕಾರ್ಯಕ್ರಮ ಇದೇ ತಿಂಗಳ 17 ರಂದು ಜರುಗಲಿದ್ದು, ಇದರಲ್ಲಿ ಪಾಲ್ಗೊಂಡು ತಾಯಿಯ ಆಶೀರ್ವಾದ ಪಡೆಯಲು ಬರುವ ಎಲ್ಲಾ ಭಕ್ತಾದಿಗಳಿಗೂ ಶುಭ ಹಾರೈಕೆಗಳು.
ಸಾವಿರಾರು ವರ್ಷಗಳಿಂದ ಕೊಡಗಿನ ಜನರ ಭಾವನೆಗಳಿಗೆ, ಧಾರ್ಮಿಕ ನಂಬಿಕೆಗಳಿಗೆ ಸಾಕ್ಷಿಯಾಗಿರುವ ಈ ಕಾರ್ಯಕ್ರಮ ಲಕ್ಷಾಂತರ ಜನರ ಸಮ್ಮುಖದಲ್ಲಿ ಸುಸೂತ್ರವಾಗಿ ನಡೆದು ಕಾವೇರಿ ತಾಯಿಯ ತೀರ್ಥೋದ್ಭವ ದರ್ಶನದ ಜೊತೆಗೆ ಆಕೆಯ ಆಶೀರ್ವಾದ ದೊರೆಯಲಿ ಎಂದು ಪ್ರಾರ್ಥಿಸುತೇನೆ.