ರಾಹುಲ್ ಗಾಂಧಿ ಭೇಟಿ ಮಾಡಿದ ಮಾಜಿ ಸೈನಿಕರು ಮತ್ತು ಎ ಎಸ್ ಪೊನ್ನಣ್ಣ
ದಿನಾಂಕ 11-10-2022 ರಂದು ಪಕ್ಷದ ಭಾರತ ಐಕ್ಯತಾ ಯಾತ್ರೆಯು, ಚಿತ್ರದುರ್ಗದ ಹಿರಿಯೂರು ತಾಲ್ಲೂಕು ತಲುಪಿದಾಗ, ಪಕ್ಷದ ಕಾನೂನು, ಮಾನವ ಹಕ್ಕು ಹಾಗೂ ಆರ್.ಟಿ.ಐ ಘಟಕದ ಅಧ್ಯಕ್ಷನಾಗಿ ಮತ್ತು ಕೊಡಗಿನ ಮಾಜಿ ಸೈನಿಕರು ಮತ್ತು ಅಧಿಕಾರಿಗಳ ನಿಯೋಗದೊಂದಿಗೆ ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದೆ.
ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ತಂಡದಲ್ಲಿ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ಬ್ರಿಗೇಡಿಯರ್ ಪಿ.ಟಿ.ಮೊನ್ನಪ್ಪ, ಕೋಮಾಡಾರ್ ಜಿ.ಜೆ.ಸಿಂಗ್, ಹಾಗೂ ಮೇಜರ್ ಸಿ.ಯು.ಮೊನ್ನಪ್ಪ ಭಾಗಿಯಾಗಿದ್ದರು.
ಈ ಸಂಧರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ಮಾಡಿ, ಮಾಜಿ ಸೈನಿಕರಿಗೆ ಸಿಗಬೇಕಾದ ಭೂ-ಮಂಜೂರಾತಿ (ಸರ್ಕಾರಿ ಗ್ರಾಂಟ್) ಗಳನ್ನು ಸರ್ಕಾರ ನೀಡುವಲ್ಲಿ ವಿಫಲವಾಗಿರುವ ಬಗ್ಗೆ ತಿಳಿಸಲಾಯಿತು. ಇದೇ ರೀತಿ ಸೈನಿಕರ ವಿಧವೆಯರು (war widows) ಗಳಿಗೆ ಪೆನ್ಶನ್ ನೀಡುವಲ್ಲಿ ಆಗಬೇಕಾದ ಕ್ರಮಗಳ ಬಗ್ಗೆ ವಿವರಿಸಲಾಯಿತು.
ಕೊಡಗು, ದೇಶಕ್ಕೆ ಹಲವಾರು ಸೈನಿಕರನ್ನು ಕೊಟ್ಟ ಪ್ರದೇಶ. ಸೈನ್ಯಕ್ಕೆ ನಡೆಯುವ ಆಯ್ಕೆ-ನೇಮಕಾತಿ ಪ್ರಕ್ರಿಯೆಯನ್ನು ಇಲ್ಲೇ ನಡೆಸುವ ಬಗ್ಗೆ ಅವರಿಗೆ ವಿಷಯ ಮನವರಿಕೆ ಮಾಡಲಾಯಿತು. ಹಲವಾರು ಅಂತರಾಷ್ಟ್ರೀಯ ಹಾಕಿ ಕ್ರೀಡಾಪಟುಗಳನ್ನು ಕೊಡುಗೆ ಕೊಟ್ಟ ನಮ್ಮ ಜಿಲ್ಲೆಗೆ ಸುಸಜ್ಜಿತ ಆಧುನಿಕ ಹಾಕಿ ಕ್ರೀಡಾಂಗಣದ ಅವಶ್ಯಕತೆ ಬಗ್ಗೆ ಅವರಿಗೆ ತಿಳಿಸಲಾಯಿತು.
ಇದರ ಜೊತೆಗೆ ಕೊಡಗು ಜಿಲ್ಲೆಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ರಾಹುಲ್ ಗಾಂಧಿ ಅವರ ಜೊತೆ ದೀರ್ಘ ಸಮಾಲೋಚನೆ ನಡೆಸಿದೆ. ಅವರ ಸಕಾರಾತ್ಮಕ ಬೆಂಬಲ ಎಲ್ಲಾ ಬೇಡಿಕೆಗಳ ಮೇಲು ಇದೆ.
ಇದೇ ಸಂಧರ್ಬದಲ್ಲಿ ರಾಹುಲ್ ಗಾಂಧಿ ಅವರಿಗೆ ಕೊಡಗಿನ ಸಾಂಪ್ರದಾಯಿಕ ಪೀಚೆ ಕತ್ತಿಯನ್ನು ಉಡುಗೊರೆಯಾಗಿ ಕೊಟ್ಟು ಅಭಿನಂದಿಸಿದೆ.