ಪುಸ್ತಕ ಬಿಡುಗಡೆ ಕಾರ್ಯಕ್ರಮ
ಹುದಿಕೇರಿ ಕೊಡವ ಸಮಾಜದಲ್ಲಿ, ಕೊಡವ ಕೂಟಾಳಿಯಡ ಕೂಟದವರು ಆಯೋಜಿಸಿದ್ದ ಪದ್ದತಿ ಪಡಿಕನ, ಸಮ್ಮಂದ ಅಡ್ಕನಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
ಪುಸ್ತಕ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ನಮ್ಮ ಬಾಷೆ ಉಳಿವಿನೊಂದಿಗೆ ನಮ್ಮ ಪದ್ಧತಿಗಳು ಉಳಿಯುತ್ತವೆ. ನಮ್ಮ ಭಾಷೆ, ಸಂಸ್ಕೃತಿ ಮತ್ತು ಪದ್ಧತಿಗಳ ಬಗ್ಗೆ ಪುಸ್ತಕಗಳನ್ನು ಬರೆದಾಗ ಅವುಗಳನ್ನು ಉಳಿಸಲು ಅನುಕೂಲವಾಗುತ್ತದೆ. ಭಾಷೆ ಕೇವಲ ವ್ಯವಹಾರಕ್ಕೆ ಸೀಮಿತವಾಗಾಬಾರದು. ಅವು ನಮ್ಮ ಸಂಸ್ಕೃತಿಯ ಪ್ರತೀಕ.
ಕೋಟ್ಯಂತರ ಜನ ಮಾತನಾಡುವ ಕನ್ನಡಕ್ಕೆ 2,100 ರ ವೇಳೆಗೆ ಅಪಾಯ ಇದೆ ಎಂದು ಬಾಷಾತಜ್ಞರು ಎಚ್ಚರಿಸಿದ್ದಾರೆ. ಇನ್ನು ಕೇವಲ ಒಂದು ಲಕ್ಷದ ಐವತ್ತು ಸಾವಿರ ಜನ ಮಾತನಾಡುವ ಕೊಡವ ಭಾಷೆಗೆ ಅಪಾಯ ತಪ್ಪಿದ್ದಲ್ಲ. ನಮ್ಮ ಭಾಷೆ ಜೊತೆಗೆ ನಮ್ಮ ಸಂಸ್ಕೃತಿ ಉಳಿಸುವ ಕೆಲಸ ನಾವು ಮಾಡಬೇಕು.
ಈ ನಿಟ್ಟಿನಲ್ಲಿ ಕೊಡವ ಕೂಟಾಳಿಯಡ ಕೂಟ ಮುಂತಾದ ಸಂಘಟನೆಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ. ಅವರಿಗೆ ನನ್ನ ಅಭಿನಂದನೆಗಳು.