ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಣೆ
ಎ.ಕೆ.ಸುಬ್ಬಯ್ಯ-ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ (ಅಜ್ಜಿಕುಟ್ಟೀರ) ನಿಂದ, ದಿವ್ಯಾಂಗರ ಒಕ್ಕೂಟ ಸಹಯೋಗದಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳ ವಿಶೇಷ ಚೇತನರಿಗೆ ಆಹಾರ ಕಿಟ್ ಮತ್ತು ಒಕ್ಕೂಟಕ್ಕೆ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಳಾಗಿತ್ತು.
ಹುದಿಕೇರಿಯ ಕೊಡವ ಸಮಾಜದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದೆ. ಒಕ್ಕೂಟವು ವಿಶೇಷ ಚೇತನರಿಗೆ ಮಾಡುತ್ತಿರುವ ಕೆಲಸಗಳು ಶ್ಲಾಘನೀಯ ಮತ್ತು ಅನುಕರಣೀಯ. ನಿಸ್ವಾರ್ಥದಿಂದ ಒಕ್ಕೂಟ ಸಲ್ಲಿಸುತ್ತಿರುವ ಸೇವೆಗೆ ನಮ್ಮ ಟ್ರಸ್ಟ್ ಕೈಜೋಡಿಸಿದ್ದು ನನಗೆ ಹೆಮ್ಮೆ ಇದೆ.
ನಮ್ಮ ಟ್ರಸ್ಟ್ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಜನರ ಸೇವೆಯಲ್ಲಿ ತೊಡಗಿಕೊಂಡಿದೆ. ಸಮಾನತೆಯ, ಒಗ್ಗಟ್ಟಿನ ಸಮಾಜ ನಿರ್ಮಾಣವೇ ನಮ್ಮ ಧ್ಯೇಯವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣೇಶ್ ಕೆ.ಎನ್, ಅಜ್ಜಿಕುಟ್ಟೀರ ಎಸ್.ಕಾರ್ಯಪ್ಪ, ಕೊಲ್ಲೀರ ಬೋಪಣ್ಣ, ಮೀದೇರಿರ ನವೀನ್ ಅವರುಗಳಿಗೆ ಧನ್ಯವಾದಗಳು.
