ಆಧುನಿಕ ಭಾರತದ ಇತಿಹಾಸದಲ್ಲಿ ವಕೀಲರ ಪಾತ್ರ ಮಹತ್ವದ್ದು. ನಮ್ಮ ಸ್ವಾತಂತ್ರ್ಯ ಹೋರಾಟದ ಹಲವಾರು ನಾಯಕರುಗಳು ವಕೀಲರಾಗಿದ್ದವರು. ಮುಂದೆ ದೇಶಕಟ್ಟಿದ ಹಲವಾರು ನಾಯಕರು ವಕೀಲಿ ವೃತ್ತಿಯಿಂದ ಬಂದವರು.
ಈಗ ಭಾರತ ಐಕ್ಯತಾ ಯಾತ್ರೆಯಲ್ಲಿ ಕೂಡ ವಕೀಲರ ಪಾತ್ರ ಮಹತ್ವದ್ದು. ದೇಶಕ್ಕೆ ಒಗ್ಗಟ್ಟಿನ ಅವಶ್ಯಕತೆ ಇದೆ. ಜನರನ್ನು ಬೆಸೆಯುವ ಕೆಲಸ ಮಾಡುವವರು ಬೇಕಾಗಿದ್ದಾರೆ. ಆ ಕೆಲಸವನ್ನು ತಮ್ಮ ವೃತ್ತಿಯಲ್ಲೂ ಮಾಡುವ ವಕೀಲರು ಐಕ್ಯತಾ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ.
ಪಕ್ಷದ ಕಾನೂನು ಘಟಕದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿರುವವರು, ಪದಾಧಿಕಾರಿಗಳ ಜೊತೆಗೆ ದೇಶದ ಬಗ್ಗೆ ಪ್ರೀತಿಯಿರುವ, ಐಕ್ಯತೆಗೆ ಬೆಂಬಲ ಕೊಡಲು ಬರುತ್ತಿರುವ ವಕೀಲರುಗಳಿಗೆ ನನ್ನ ಅಭಿನಂದನೆ ಮತ್ತು ಧನ್ಯವಾದಗಳು. ಎಲ್ಲರ ಆದರ್ಶದ ಈ ನಡಿಗೆ ದೇಶಕ್ಕೆ ಹೊಸ ದಾರಿಯಾಗುವ ನಿಟ್ಟಿನಲ್ಲಿ ಸಾಗಲಿ.