ಐತಿಹಾಸಿಕ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಅಪಾರ ಪ್ರೀತಿ ವಿಶ್ವಾಸವನ್ನು ತೋರಿಸಿದ ನನ್ನ ಪ್ರೀತಿಯ ಕೊಡಗಿನ ಜನರಿಗೆ ನನ್ನ ಪ್ರಣಾಮಗಳು ಮತ್ತು ಧನ್ಯವಾದಗಳು.
ನೀವು ತೋರಿಸಿದ ಈ ಅಕ್ಕರೆಯ ಬೆಂಬಲ ಎಂದಿಗೂ ಮರೆಯಲಾಗದು. ದೇಶದ ಗಮನ ಈ ಯಾತ್ರೆಯ ಮೇಲೆ ಇದೆ. ಈಗ ಕರ್ನಾಟಕದಲ್ಲಿ ಸಂಚರಿಸುತ್ತಿರುವ ಯಾತ್ರೆಯಲ್ಲಿ ನಾನು ಪಾಲ್ಗೊಂಡ ಸಂಧರ್ಬದಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿ ನೀವು ಕೊಟ್ಟ ಬೆಂಬಲ ಅವಿಸ್ಮರಣೀಯ.
ನಿಮ್ಮೆಲ್ಲರ ವಿಶ್ವಾಸವನ್ನು ಗಳಿಸಿರುವುದು ನನಗೆ ಹೆಮ್ಮೆ ಇದೆ. ದೇಶ ಕಟ್ಟುವ ಕೆಲಸದಲ್ಲಿ ಕೊಡಗಿನ ಜನ ಸದಾ ಮುಂಚೂಣಿಯಲ್ಲಿ ಇರುತ್ತಾರೆ ಎನ್ನುವ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ. ನಾವೆಲ್ಲ ಒಗ್ಗಟ್ಟಿನಿಂದ ಮುನ್ನಡೆಯೋಣ.